ಏನಿರಬಹುದು ಅಂತರಿಕ್ಷದಾಚೆ :

 ಎಲ್ಲವೂ ಇದ್ದರೂ ಏನೂ ಇಲ್ಲ

ಬದುಕು ಶೂನ್ಯವೆಂದು ಆಕಾಶದತ್ತ ನೋಡುತ್ತಾ
ಈ ಜನರ ಅಂಕುಡೊಂಕು ಮಾತಿನಿಂದ ತಪ್ಪಿಸಿಕೊಂಡು
ಹೋಗಿ ಬಿಡಬೇಕು ಬಹುದೂರ
ಅಂತರಿಕ್ಷದಾಚೆ ಎಲ್ಲೋ
ಅಲ್ಲಿ ಏನೋ ಇರುವುದೆಂದು
ಇಲ್ಲಿಂದ ಕಾಣುವ ಆ ಕನಸೇ ಚೆಂದ
ಕಾಣದನ್ನು ಕಾಣುವ ಆಸೆ ಈ ಕಣ್ಣಿಗೆ

ಅನುಭವಿಸಿದ ನೋವು ಅವಮಾನಗಳೆ
ಇಂದು ನನ್ನನು ಗಟ್ಟಿ ಮಾಡಿದೆ
ಇನ್ನು ತಿರುಗಿ ನೋಡುವ ಮಾತೇ ಇಲ್ಲ
ಏಕೆಂದರೆ ನಾನು ಯಾವ ತಪ್ಪೂ ಮಾಡಲಿಲ್ಲ
ಪಶ್ಚಾತಾಪ ಪಡುವಂತೆ
ಇದನ್ನು ಅರಿಯಲು ಅದೆಷ್ಟು ಸಮಯ
ವ್ಯರ್ಥ ಮಾಡಿಕೊಂಡೆ ಕೊರಗುತ್ತಾ

ಜೀವನ ಕಲಿಸಿದ ಪಾಠವಾ ಅರಿತಾಗ
ಮನಸೇಕೊ ಹಗುರಾಗಿದೆ
ಅನಗತ್ಯ ಯೋಚನೆ ಬಿಟ್ಟಾಗಿದೆ
ಎಂದೂ ಕೂಡ ಇಷ್ಟೊಂದು ನೆಮ್ಮದಿ
ನಾ ಕಾಣಲೇ ಇಲ್ಲ
ಯಾಕೆಂದರೆ ನಾ ಇರುವಲ್ಲಿಯೇ ಇದೆ ಎಲ್ಲಾ
ಅಂತರಿಕ್ಷದಾಚೆ ಏನೂ ಇಲ್ಲಾ...

✍️ ಅನೂಲಿಪಿ

Comments

Popular Posts