ನಂಬಲಿ ಯಾರನ್ನು....?
ಬದುಕಿನಲ್ಲಿ ಎಲ್ಲರೂ ಒಂದಲ್ಲ ಒಂದು ರೀತಿಯಲ್ಲಿ ಮೋಸ ಹೋಗಿರುತ್ತಾರೆ. ಹೊರಗಿನವರು ಯಾರೋ ಮೂರನೇಯವರು ಮೋಸ ಮಾಡಿದರೆ ಅದು ನಮಗೆ ಅಷ್ಟೊಂದು ನೋವು ಕೊಡೋದಿಲ್ಲ ಕಾಲ ಕ್ರಮೇಣ ನಾವು ಅದನ್ನು ಮರೆತು ಬಿಡುತ್ತೇವೆ. ಆದರೆ ನಮ್ಮವರೇ ನಮ್ಮ ಕುಟುಂಬದವರೇ ನಮಗೆ ನಂಬಿಕೆ ದ್ರೋಹ ಮಾಡಿದರೆ ಅದು ನಮ್ಮ ಕೊನೆ ಉಸಿರಿರುವವರೆಗೂ ಹಾಗೆ ಕಹಿ ನೆನಪಾಗಿ ಉಳಿದಿರುತ್ತದೆ. ಯಾರದೋ ಸಿಟ್ಟು ಸೇಡಿಗೆ ಬಲಿಪಶು ಆಗುವುದು ತಪ್ಪೇನು ಮಾಡದ ಇನ್ನೊಂದು ಜೀವ. ಆದರೆ ನಂಬಿಕೆ ದ್ರೋಹ ಬಗೆದು ಮೋಸ ಮಾಡಿ ಮೆರೆದವರು ಯಾರು ಇಲ್ಲ. ಇದೆಲ್ಲಾ ನಮ್ಮ ಜೀವನಕ್ಕೆ ಒಂದು ಒಳ್ಳೆಯ ಪಾಠ, ನಮ್ಮವರೇ ನಮಗೆ ಮೋಸ ಮಾಡಿದಾಗ "ನಂಬಲಿ ಯಾರನ್ನು" ಎಂಬ ಪ್ರಶ್ನೆ ಮನಸಿನಲ್ಲಿ ಮೂಡುತ್ತದೆ ಆಗ ನಾವು ಹೊರಗಿನವರನ್ನು ನಂಬುವುದಕ್ಕೂ ಮುಂಚೆ ಹತ್ತು ಬಾರಿ ಯೋಚಿಸುತ್ತೇವೆ ನಮ್ಮ ನಂಬಿಕೆಗೆ ಯೋಗ್ಯರಾ ಎಂದು. ಕೆಲವರು ನಂಬಿಸುವಂತೆ ನಟಿಸುತ್ತಾರೆ ನಾವು ನಂಬುವಂತೆ ನಟಿಸಬೇಕು ಅಷ್ಟೇ ಆದರೆ ಸುಲಭವಾಗಿ ಯಾರನ್ನು ನಂಬುವುದಕ್ಕೆ ಹೋಗಬಾರದು. ಯಾರ ಮಾತಿಗೂ ಮರುಳಾಗಿ ಯಾಮಾರಬಾರದು, ಇಲ್ಲವಾದಲ್ಲಿ ಪದೇಪದೆ ನಾವು ಮೋಸ ಹೋಗಿ ನೋವು ಅನುಭವಿಸುತ್ತೇವೆ. ಇಷ್ಟೆಲ್ಲಾ ಗೊತ್ತಿದ್ದು ಕೂಡ ನಾವು ಯಾವುದೋ ಮಾಯೆಗೆ ಒಳಗಾಗಿ ಬದುಕಿನಲ್ಲಿ ಮೋಸ ಹೋಗುತ್ತಲೇ ಇರುತ್ತೇವೆ.
✍️ ಅನೂಲಿಪಿ
Comments
Post a Comment