ಅಪಪ್ರಚಾರ
ಅಪಪ್ರಚಾರ ಮಹಾ ಪಾಪ. ಅದರಿಂದ ಒಬ್ಬರ ಸುಂದರ ಜೀವನ ನಶಿಸಿ ಹೋಗಬಹುದು. ಹಾಕಿದ ಕಣ್ಣೀರು ಶಾಪವಾಗಿ ಪರಿಣಮಿಸುತ್ತದೆ.
ನಮ್ಮಲ್ಲಿ ಹೇಗೆ ಎಂದರೆ ಶ್ರೀಮಂತರ ಮನೆ ಮಕ್ಕಳು ತಪ್ಪು ಮಾಡಿದಾಗ ಅವರ ತಪ್ಪಿದ್ದರೂ ಅಯ್ಯೋ ಪಾಪ ಎಷ್ಟು ಅಪಪ್ರಚಾರ ಮಾಡುತ್ತಿದ್ದಾರೆ ಬೇಕೆಂದೇ ಹೆಸರು ಹಾಳು ಮಾಡುತ್ತಿದ್ದಾರೆ, ಅಸೂಯೆಯಿಂದ ಸುಳ್ಳು ಹೇಳುತ್ತಿದ್ದಾರೆ ಎಂದು ಪರವಾಗಿ ಮಾತನಾಡುತ್ತಾರೆ, ಅದಕ್ಕೆ ಕಾರಣ ಅವರ ಬಳಿ ಇರುವ ಶ್ರೀಮಂತಿಕೆ. ಅದುವೇ ಮಧ್ಯಮ ವರ್ಗದ ಮಕ್ಕಳು ಎಷ್ಟೇ ಸರಿಯಾಗಿದ್ದರೂ ತಪ್ಪು ಮಾಡದೇ ಧೋಷಿಯಾದಾಗ ಸತ್ಯವನ್ನು ತಿಳಿಯದೆ ಅಪಪ್ರಚಾರ ಮಾಡುತ್ತಾರೆ, ಅನುಮಾನಿಸುತ್ತಾರೆ ಹೌದು ನಿಜವಿರಬಹುದು ಅವರ ಮಗಳು/ಮಗ ಸರಿಯಿಲ್ಲ ಹಾಗೆ ಹೀಗೆ ಎಂದು ಕಾಡ್ಗಿಚ್ಚಿನಂತೆ ಸುಳ್ಳು ಸುದ್ದಿ ಹಬ್ಬಿಸಿ ಬಿಡುತ್ತಾರೆ, ಯಾಕೆಂದರೆ ಶ್ರೀಮಂತಿಕೆ ಇಲ್ಲದಿರುವುದು. ಇದರ ಕರ್ಮ ಫಲ ಒಂದಲ್ಲ ಒಂದು ದಿನ ಅಪಪ್ರಚಾರ ಮಾಡಿದವರೇ ಅನುಭವಿಸುತ್ತಾರೆ.ನೀವು ಇನ್ನೊಬ್ಬರ ಬಗ್ಗೆ ಅಪಪ್ರಚಾರ ಮಾಡಿದರೆ ನಿಮ್ಮ ಒಡಹುಟ್ಟಿದವರ ಜೀವನದಲ್ಲಿ ಅಥವಾ ನಿಮ್ಮ ಮನೆ ಮಕ್ಕಳು ಕಷ್ಟ ಅನುಭವಿಸುತ್ತಾರೆ. ನೀವು ಇನ್ನೊಬ್ಬರ ಬಗ್ಗೆ ಕಟ್ಟು ಕಥೆ ಕಟ್ಟಿದರೆ ಅದೆ ರೀತಿ ಕಥೆ ನಿಮ್ಮ ಮನೆಯಲ್ಲಿ ನಡೆಯಬಹುದು. ಅದು ನೀವು ಇನ್ನೊಬ್ಬರ ಮಕ್ಕಳ ಬಗ್ಗೆ ಅಪಪ್ರಚಾರ ಮಾಡಿದರ ಕರ್ಮಫಲ ಎಂದು ನಿಮ್ಮ ಅರಿವಿಗೆ ಬರೋದಿಲ್ಲ ಅಷ್ಟೊಂದು ಅಜ್ಞಾನದಲ್ಲಿ ಬದುಕುತ್ತಿದ್ದೀರಿ ಎಂದು ತಿಳಿದುಕೊಳ್ಳಿ.
ಕರ್ಮಫಲಕ್ಕೆ ಮಾಧ್ಯಮ ವರ್ಗದವರು ಬಡುವರು ಶ್ರೀಮಂತರೆಂಬ ಭೇದವಿಲ್ಲ.
✍️ ಅನೂಲಿಪಿ
Comments
Post a Comment