ಅನುಭವದ ಕಲಿಕೆ :

 ಜೀವನದಲ್ಲಿ "ಸಹನೆ" ಹೇಗಿರಬೇಕು ಎಂದು ನನ್ನ ತಾಯಿಯಿಂದ ತಿಳಿದುಕೊಂಡೆ.


"ಆಗೋದೆಲ್ಲ ಒಳ್ಳೆಯದಕ್ಕೆ" ಎಂಬ ಸಕಾರಾತ್ಮಕ ಗುಣವನ್ನು ನನ್ನ ತಮ್ಮನಿಂದ ತಿಳಿದುಕೊಂಡೆ.

ಕಷ್ಟ ಮತ್ತು ಸುಖ ಎರಡನ್ನೂ ಒಂದೇ ರೀತಿಯಲ್ಲಿ ಸ್ವೀಕರಿಸಿ ಅಹಂಕಾರ ಪಡದೆ ಸಮಾಧಾನದಿಂದ ಹೇಗಿರಬೇಕೆಂದು ನನ್ನ ಗಂಡನಿಂದ ತಿಳಿದುಕೊಂಡೆ.

ಇನ್ನು ಇಷ್ಟು ಚಿಕ್ಕ ವಯಸ್ಸಿಗೆ ಒಂದು ಅದ್ಭುತವಾದ ತಿಳುವಳಿಕೆ "ಸಾಕು ನನಗೆ ಏನು ಬೇಡ ಇದೆ ಎಲ್ಲಾ" ಎಂಬುವುದನ್ನು ನನ್ನ ಎರಡುವರೆ ವರ್ಷದ ಮಗಳಿಂದ ತಿಳಿದುಕೊಂಡೆ.

ಹಾಂ..! ಅಷ್ಟು ಚಿಕ್ಕ ಮಗುವಿಗೆ ಏನು ಗೊತ್ತಿರಲು ಸಾದ್ಯ ಸಾಕು ಬೇಕೆಂದು ಅದಕ್ಕೇನು ಗೊತ್ತು ಅಂತ ನಿಮಗೆಲ್ಲ ಅನಿಸಬಹುದು.
ಹೌದು, ನಾನು ಪ್ರತಿ ಬಾರಿ ನನ್ನ ಮಗಳ ಬಳಿ ನಿನಗೇನು ಬೇಕು ಎಂದು ಕೇಳಿದಾಗಲೆಲ್ಲಾ, ಇದೆ ಅಲ್ಲಾ, ಸಾಕು ನನಗೇನೂ ಬೇಡ ಅನ್ನುತ್ತಾಳೆ.

ಆದರೆ ನಾವು ಹಾಗಲ್ಲ ನಮಗೆ ಎಷ್ಟಿದ್ದರೂ ಸಾಲದು ತೋರಿಕೆಗೆ, ಆಡಂಬರಕ್ಕೆ.., ಎಂದಾದರೂ ನಾವು "ಸಾಕು" ಎನ್ನುವ ತೃಪ್ತಿಯ ಭಾವನೆ ಹೊಂದಿದ್ದೇವಾ...? ಬದುಕಿಗೆ ಬೇಕಾದಷ್ಟು ತಿಳುವಳಿಕೆ ಇದ್ದರೂ ಅಜ್ಞಾನಿಗಳಂತೆ ಬದುಕುತ್ತಿದ್ದೇವೆ.

ಹೀಗೆ ಒಮ್ಮೊಮ್ಮೆ ಮಕ್ಕಳು ನಮ್ಮ ಕಣ್ತೆರೆಸುತ್ತಾರೆ...


✍️ ಅನೂಲಿಪಿ

Comments

Popular Posts